Wednesday, August 3, 2011

Tookadisi Tookadisi - Paduvarahalli Pandavaru

ಚಿತ್ರ: ಪಡುವಾರಹಳ್ಳಿ ಪಾಂಡವರು
ರಚನೆ: -
ಗಾಯನ: ಪಿ.ಬಿ.ಶ್ರೀನಿವಾಸ್

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮ 

ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಅಕ್ಷರದ ಸಕ್ಕರೆಯ ಕಹಿಯೆಂದು ತಿಳಿದು ಪುಸ್ತಕವ ಕಸಕಿಂತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆಬರಹವೆಂದು
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಹಾಕ್ಕಿಟ್ಟ ಹುಯ್ಗಂಜಿ ತುಂಡು ತಂಬಲಿಗೆ ಸಾವಿಟ್ಟರೋ ಕೊರಳ ಜೀತದ ಕತ್ತರಿಗೆ
ಬಿಕ್ಕೆಟ್ಟರೋ ನರಳಿ ಜೀವಶದಂತೆ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಬದುಕನ್ನು ಎದುರಿಸಲು ಕಣ್ತೆರೆದು ನೋಡಾ ಬೆದೆರಿಕೆಗೆ ಕೈ ಕಟ್ಟಿ ಆಳಾಗ ಬೇಡ
ಕೊಚ್ಚೆಯ ಹುಳುವಂತೆ ಕುರುಡಾಗ ಬೇಡ

2 comments: