ಹಾಡು: ಬಾರಿಸು ಕನ್ನಡ ಡಿಂಡಿಮವ ರಚನೆ: ಕುವೆಂಪು ಗಾಯನ: ಶಿವಮೊಗ್ಗ ಸುಬ್ಬಣ್ಣ
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿಂಡಿಮವ ||
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ
ಬಾರಿಸು ಕನ್ನಡ ಡಿಂಡಿಮವ ||
English translation (work in progress):
Play the Kannada music O! Karnataka you are my heart
Play the Kannada music
Wake up by patting those who are like dead Bring together and please those who are fighting Shed tears over jealousy Wish them such that they live together
Play the Kannada music
Let there be vitality and delight in all work Let every intellect bloom into bliss Under the model of poets, sages, and saints Let it rise, in everybody
[ಅಕ್ಕಿ ನೀನ್ನ ನನ್ನ ನಾನ್ನ ನನ್ನ ನನ್ನ ನನ್ನ ... ಅ ಆ ಅ ಅ ಅ ಆ ... ]
ಶಿವಾ ಅಂತಾ ಹೋಗುತ್ತಿದ್ದೆ road-ನಲ್ಲಿ
ಸಿಕ್ಕಾಪಟ್ಟೆ ಸಾಲ ಇತ್ತು life-ನಲ್ಲಿ
ಅರ್ಧ tank petrol ಇತ್ತು bike-ನಲ್ಲಿ
ನೀ ಕಂಡೆ side-ನಲ್ಲಿ
[ಅಕ್ಕಿ ನೀನ್ನ ನನ್ನ ನಾನ್ನ ನನ್ನ ನನ್ನ ನನ್ನ ...]
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲ್ಲಿ
ಕಂಬ್ಳಿ ಹುಳಾ ಬಿಟ್ತಂಗಾಯ್ತು heart-ನಲ್ಲಿ
ಕಚ್ಚೆಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ ನೀ
ಕುಂತಾಗಾ bike-ನಲ್ಲಿ, bike-ನಲ್ಲಿ, bike-ನಲ್ಲಿ, bike-ನಲ್ಲಿ
[ಓಹೋ ವ, ವ ಅವ ... ] top gear ಹಾಕಂಗಿಲ್ಲ, ಸುಮ್ನೆ break ಹೊಡಿಯೊಂಗಿಲ್ಲ - 2
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು, ಥೂ! ನನ್ಗೆ ಯಾಕೆ ಹಿಂಗೆಯೆಲ್ಲಾ ಅನಿಸುವದು
ಒಂದು ಮಾತು ... ಕೇಳಲಿಲ್ಲ ...
ಒಂದು ಮಾತು ಕೇಳಲಿಲ್ಲ, ಹಿಂದೆ ಮುಂದೆ ನೋಡಲಿಲ್ಲ,
ನನ್ನ ಎದೆ site-ಅನು ಕೊಂಡುಕೊಂಡು ತಡಮಾಡದೆ ಪಾಯವ ತೋಡಿ ಬಿಟ್ಲು,
ಹೂವಿನಂಥ ಹುಡುಗ ನಾನು ತುಂಬಾ ಮೃದು - 2
ಹೆಣ್ಣ್ ಮಕ್ಕಳೇ strong ಗುರು, wrong ಗುರು, wrong ಗುರು - 2
[ಶಿವಾ ಅಂತಾ ಹೋಗುತ್ತಿದ್ದೆ road-ನಲ್ಲಿ]
[ಕಮಿಯೋ, ಕಾಫಿಯೋ, ವವು ವಾವ್, ವವುವವ್ ... ] ಉಣ್ಣಲಿಲ್ಲ ತಿನ್ನಲಿಲ್ಲ, ಮಠ-ಮಠ ಮಧ್ಯಾನವೇ,
ಉಣ್ಣಲಿಲ್ಲ ತಿನ್ನಲಿಲ್ಲ, ಮಠ-ಮಠ ಮಧ್ಯಾನ
ಕುಂತು ಬಿಟ್ಲು ಹಿಂದುಗಡೆ seat-ನಲ್ಲಿ, ನಾವು ಹೊಡ್ಕೊಬೇಕು ನಮ್ಮದೇ boot-ನಲ್ಲಿ
ಒಂದು KG, ಅಕ್ಕಿ rate ...
ಒಂದು KG ಅಕ್ಕಿ rate 30 ರುಪಾಯಿ ಆಗೆಹೊಯ್ತು
easy ಆಗಿ ಹೇಗೆ ನಾನು ಪ್ರೀತಿಸಿಲಿ? ಅದರಲ್ಲೂ ಮೊದಲನೇ ಭೇಟಿಯಲ್ಲಿ
ration card ಬೇಕೇ ಬೇಕು ಪ್ರೀತಿಸಲು - 2
ಸಂಸಾರ ಬೇಕಾ ಗುರು?ಬೇಕು ಗುರು, ಬೇಕು ಗುರು, ಬೇಕು ಗುರು, ಬೇಕು ಗುರು
[[ಶಿವಾ ಅಂತಾ ಹೋಗುತ್ತಿದ್ದೆ road-ನಲ್ಲಿ]]
ಹಾಡು: ಓ ನನ್ನ ಚೇತನ ಆಗು ನೀನು ಅನಿಕೇತನ
ರಚನೆ: ಕುವೆಂಪು
ಗಾಯನ: ಶ್ರೀ. ಮೈಸೂರು ಅನಂತಸ್ವಾಮಿ
ಸಂಗ್ರಹ: ಭಾವ ಸಂಗಮ
ಓ ನನ್ನ ಚೇತನ, ಆಗು ನೀ ಅನಿಕೇತನ
ರೂಪರೂಪಗಳನು ದಾಟಿ, ನಾಮಕೊಟ್ಟಿಗಳನು ಮೀಟಿ,
ಎದೆಯ ಬಿರಿಯ ಭಾವ ಬೀಸಿ,
ಓ ನನ್ನ ಚೇತನ, ಆಗು ನೀ ಅನಿಕೇತನ
ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನೀ ಅನಿಕೇತನ
ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು,
ಕೊನೆಯನೆಂದು ಮುಟ್ಟದಿರು,
ಓ ಅನಂತವಾಗಿರು,
ಓ ನನ್ನ ಚೇತನ, ಆಗು ನೀ ಅನಿಕೇತನ
ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ,
ಅನಂತ ನೀ ಅನಂತವಾಗು, ಆಗು ಆಗು ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ
English translation:
O my spirit! Set roots nowhere, O my spirit!
Grow beyond the myriad forms, go beyond the countless names,
From a heart overfull, inspiration bursts forth
O my spirit! Set roots nowhere O my spirit!
Winnow the chaff of a hundred creeds,
Stretch beyond the stifling philosophies,
Rise, immense and endless as the cosmos,
O my spirit! Set roots nowhere O my spirit!
Rest nowhere on the unending road, never build a binding nest,
Never touch the boundary, Remain infinite and boundless!!