ಹಾಡು: ಓ ನನ್ನ ಚೇತನ ಆಗು ನೀನು ಅನಿಕೇತನ
ರಚನೆ: ಕುವೆಂಪು
ಗಾಯನ: ಶ್ರೀ. ಮೈಸೂರು ಅನಂತಸ್ವಾಮಿ
ಸಂಗ್ರಹ: ಭಾವ ಸಂಗಮ
ಓ ನನ್ನ ಚೇತನ, ಆಗು ನೀ ಅನಿಕೇತನ
ರೂಪರೂಪಗಳನು ದಾಟಿ, ನಾಮಕೊಟ್ಟಿಗಳನು ಮೀಟಿ,
ಎದೆಯ ಬಿರಿಯ ಭಾವ ಬೀಸಿ,
ಓ ನನ್ನ ಚೇತನ, ಆಗು ನೀ ಅನಿಕೇತನ
ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನೀ ಅನಿಕೇತನ
ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು,
ಕೊನೆಯನೆಂದು ಮುಟ್ಟದಿರು,
ಓ ಅನಂತವಾಗಿರು,
ಓ ನನ್ನ ಚೇತನ, ಆಗು ನೀ ಅನಿಕೇತನ
ಅನಂತ ತಾನ್ ಅನಂತವಾಗಿ, ಆಗುತಿಹನೆ ನಿತ್ಯಯೋಗಿ,
ಅನಂತ ನೀ ಅನಂತವಾಗು, ಆಗು ಆಗು ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ
English translation:
O my spirit! Set roots nowhere, O my spirit!
Grow beyond the myriad forms, go beyond the countless names,
From a heart overfull, inspiration bursts forth
O my spirit! Set roots nowhere O my spirit!
Winnow the chaff of a hundred creeds,
Stretch beyond the stifling philosophies,
Rise, immense and endless as the cosmos,
O my spirit! Set roots nowhere O my spirit!
Rest nowhere on the unending road, never build a binding nest,
Never touch the boundary, Remain infinite and boundless!!
Audio: http://www.kannadaaudio.com/Songs/Bhaavageethe/ONannaChetana/ONanna.ram
(any ideas on how can I embed the above youtube link? please send me your comments)
ಕುವೆಂಪು ಅವರ ಪದಗಳನ್ನ ಇಂಗ್ಲೀಶ್ನಲ್ಲಿ ಬರೆಯೋದು ಎಂತೋರಿಗಾದ್ರೂ ಬಹಳ ಕಷ್ಟ. ನಿಮ್ಮ ಪ್ರಯತ್ನ ಮೆಚ್ಚುವಂಥದ್ದಾದ್ರೂ ಅವರ ಪದಗಳನ್ನು ಸಂಪೂರ್ಣವಾಗಿ ಒಳಗೊಂಡಿಲ್ಲ ಅಂತ ನನ್ನ ಭಾವನೆ. ಇದು ಕುವೆಂಪು ಅವರ ಪದ ಬಳಕೆಯ ಜಾಣ್ಮೆಯ ಒಂದು ಉದಾಹರಣೆ, ಹಾಗೂ ಕನ್ನಡ ಪದಗಳು ಎಷ್ಟು ಅರ್ಥಗರ್ಭಿತ ಅನ್ನೋದರ ಸಾಕ್ಷಿ. ನಿಮ್ಮ ಅನುವಾದದ ಬಗೆಗಿನ ಟೀಕೆ ಅಲ್ಲ.
ReplyDeleteThat said, this will be my facebook status for some time. Thanks you.
ಯಾವ ವರ್ಷದಲ್ಲಿ ಕುವೆಂಪು ಇದನ್ನು ಬರೆದರು?
ReplyDeletearound 80s
DeleteThank you for the beutiful poem in kannada font. It feels so good to read the poem. Feels like I am back in Mysore.
ReplyDeletePlease make a small correction in the second verse.
Nooru matada hotta toori
ella tatvaDELLE meeri (You have written tatavaVELLA meeri)
ella tatvadelle is the apt word that means "all limits of ideologies" as the poet intends to convey in that line. "Let your spirit transcend all the limits of ideologies."
- Anu
kannada da kampannu pasarisida kuvempu ge namana- tarjume maadida nimagu namaskara - jai karnataka
ReplyDeletejai hind
This is one of my favourite song. Thanks for the Kannada Lyrics and English translation.
ReplyDeleteAmbikanatayadatta bakti songs needed
ReplyDeleteನನ್ನ ಅಚ್ಚುಮೆಚ್ಚಿನ ಭಾವಗೀತೆಗಳಲ್ಲಿ ಇದು ಒಂದು. ಕನ್ನಡ ಭಾವಗೀತಾ ಪರಂಪರೆಯಲ್ಲಿ ಮಾನವನ ವ್ಯಕ್ತಿತ್ವದ ವಿಕಾಸನಕ್ಕೆ ಹಲವಾರು ಗೀತೆಗಳು ರಚನೆಯಾಗಿವೆ. ಈ ನಿಟ್ಟಿನಲ್ಲಿ ಕುವೆಂಪು ಅವರ "ಓ ನನ್ನ ಚೇತನ" ಮೇರು ಕವಿತೆಯಾಗಿದೆ.
ReplyDeleteಧನ್ಯವಾದಗಳು
ನರೇಂದ್ರ ಬನ್ನಿಗೋಳ.
Meaningful
ReplyDelete