Monday, November 22, 2010

aaru hitavaru ninage (ಆರು ಹಿತವರು ನಿನಗೆ)


ಹಾಡು: ಆರು ಹಿತವರು ನಿನಗೆ
ರಚನೆ: ಪುರಂದರದಾಸ
ಗಾಯನ: ?

ಆರು ಹಿತವರು ನಿನಗೆ ಮೂರು ಮಂದಿಗಳೊಳಗೆ
ನಾರಿಯೋ ಧಾರುಣಿಯೋ ಬಲು ಧನದ ಸಿರಿಯೋ

ಅನ್ಯರಲಿ ಜನಿಸಿದ ಅಂಗನೆಯ ಕರೆತಂದು
ತನ್ನ ಮನೆಗೆ ಅವಳ ಯಜಮಾನಿಯೆನಿಸಿ
ಭಿನ್ನವಿಲ್ಲದ ಅರ್ಧ ದೇಹಯೆನಿಸುವ ಸತಿಯು
ಕಣ್ಣಿನಲಿ ನೋಡಲು ಅಂಜುವಳು ಕಾಲವಶದಿ

ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೇ ಹೊರಗೆ ಹಾಕುವರು

ಅಸ್ಥಿರದ ದೇಹವಿದು ನೆಚ್ಚಿ ನೀ ಕೆಡಬೇಡ
ಸ್ವಸ್ಥ್ಯದಲಿ ನೆನೆ ಕಂಡ್ಯ ಹರಿಪಾದವ ಚಿತ್ತದೊಳು
ಶುದ್ಧಿಯಿಂ ಪುರಂದರ ವಿಠಲನೇ
ಉತ್ತಮೋತ್ತಮ ಎಂದು ಸುಖಿಯಾಗು ಮನುಜ




Audiohttp://www.kannadaaudio.com/Songs/Devotional/PurandaradasaKritis/AaruHitavaruNinage.ram


Video:

5 comments: